ಪಂಚಗವ್ಯ ಮಾಹಿತಿ

ಪಂಚಗವ್ಯ ಮಾಹಿತಿ

ಮರಳಿ ಪಕೃತಿಗೆ, ಗುಣಪಡಿಸುವುದು ಪ್ರಕೃತಿ ನಿಮ್ಮೆಲ್ಲ ನೋವುಗಳ ಪಂಚಗವ್ಯ – ಗಿಡಗಳಿಗೆ ಪಾಕೃತಿಕ ಅಮೃತ

ಹಸುವಿನ ಸಗಣಿ  – 5 ಕೆ.ಜಿ., ಹಸುವಿನ ಮೂತ್ರ  – 3 ಲೀ., ಹುಳಿಮೊಸರು – 2 ಲೀ., ತುಪ್ಪ – 1 ಲೀ., ಕಬ್ಬಿನ ರಸ – 3 ಲೀ.  ಅಥವಾ  3 ಲೀ. ನೀರಿನಲ್ಲಿ ಕರಗಿಸಿದ ಅರ್ಧ ಕೆ.ಜಿ. ಕಪ್ಪು ಬೆಲ್ಲ, ಎಳನೀರು – 3 ಲೀ., ಬಾಳೆಹಣ್ಣು – 12, ಕಳ್ಳು / ಶೇಂದಿ – 2 ಲೀ.

ವಿಧಾನ

ಹಸುವಿನ ಸಗಣಿ ಹಾಗೂ ತುಪ್ಪವನ್ನು ಮಿಶ್ರಣ ಮಾಡಿ. 24 ಗಂಟೆಗಳ ಬಳಿಕ ಉಳಿದ ವಸ್ತುಗಳನ್ನೂ ಮಿಶ್ರಣ ಮಾಡಿ. ಈ ಮಿಶ್ರಣವನ್ನು 50 ಬಾರಿ ಪ್ರದಕ್ಷಿಣಾಕಾರದಲ್ಲಿಯೂ ಮತ್ತೆ 50 ಬಾರಿ ಅಪ್ರದಕ್ಷಿಣಾಕಾರದಲ್ಲಿಯೂ ದಿನಕ್ಕೆ ಮೂರು ಬಾರಿ ತಿರುವಿ. ಇದರಿಂದ ಈ ಮಿಶ್ರಣಕ್ಕೆ ಹೆಚ್ಚು ಆಮ್ಲಜನಕ ಸೇರಿಕೊಳ್ಳುತ್ತದೆ. ಈ ಕ್ರಮವನ್ನು ಅನುಸರಿಸಿದರೆ ಆ ಮಿಶ್ರಣ ಗಟ್ಟಿಯಾಗುವುದಿಲ್ಲ. 21 ದಿನಗಳ ಬಳಿಕ ಅದು ತಯಾರಾಗುತ್ತದೆ. ಬಳಿಕ 3 ಲೀ. ಮಿಶ್ರಣಕ್ಕೆ 100 ಲೀ. ನೀರು ಸೇರಿಸಿ ಯಾವುದೇ ಗಿಡದ ಮೇಲಾದರೂ ಸಿಂಪಡಿಸಿ. ಈ ಮಿಶ್ರಣ ಒಂದು ಎಕರೆಗೆ 20 ಲೀ. ಗಳಷ್ಟು ಬಳಸಿ. ಇದು 25% ದಷ್ಟು ಕೀಟಾಣು ನಿರೋಧಕವಾಗಿಯೂ, 75% ಪ್ರಾಕೃತಿಕ ಗೊಬ್ಬರವಾಗಿಯೂ ಕಾರ್ಯನಿರ್ವಹಿಸುತ್ತದೆ. ಫಸಲು ಇದರಿಂದ ಎರಡರಷ್ಟು ಜಾಸ್ತಿಯಾಗುತ್ತದೆ. ಬೆಳೆಯ ತೂಕ, ರುಚಿ ಹಾಗೂ ಬಣ್ಣವೂ ಇದರಿಂದ ಜಾಸ್ತಿಯಾಗುತ್ತದೆ.

ಇದರ ಮೂಲ ಸೂತ್ರ. ಈ ಗೊಬ್ಬರವನ್ನು 22 ದಿನಗಳ ಕಾಲ ಬಿಸಿಲಿನಲ್ಲಿಡಲಾಗುತ್ತದೆ. ನೇರಳೆ ಬಣ್ಣ ಹಾಯಿಸುವುದರಿಂದ ಮೊಳಕೆಯೊಡೆಯುವುದಕ್ಕೆ ಈ ಗೊಬ್ಬರ ಸಹಾಯಕವಾಗುತ್ತದೆ. ಇದಕ್ಕೆ ನವರತ್ನಗಳು ಹಾಗೂ ಇತರ ಉಪರತ್ನಗಳ ಸಾರವನ್ನು ಸೇರಿಸಲಾಗಿದೆ. ಇದರೊಂದಿಗೆ ಚಿನ್ನ ಹಾಗೂ ತಾಮ್ರಗಳಂತಹ ಲೋಹಗಳ ಸಾರವನ್ನು ಸೇರಿಸಲಾಗಿದೆ.

ಅಗ್ನಿಹೋತ್ರದ ಭಸ್ಮವನ್ನೂ ಇದಕ್ಕೆ ಸೇರಿಸಲಾಗಿದೆ. ಅಗ್ನಿಹೋತ್ರದ ಭಸ್ಮವನ್ನು ಮಣ್ಣಿನ ಮೇಲೆ ಸಿಂಪಡಿಸಿದಾಗ ಅದು ಮಣ್ಣಿಗೆ ಪೊಟಾಸಿಯಂ ಹಾಗೂ ನೈಟ್ರೋಜನ್ ನೀಡಿ ಫಲವತ್ತತೆಯನ್ನು ವೃದ್ಧಿಪಡಿಸುತ್ತದೆ. ಇವುಗಳು ರೋಗಕಾರಕವಾದ ಸೂಕ್ಷಾಣು ಜೀವಿಗಳನ್ನು ಹತೋಟಿಯಲ್ಲಿಡುವ ಗುಣ ಹೊಂದಿದೆ. ಅವು ಕರಗಬಲ್ಲ ಫಾಸ್ಟೇಟನ್ನು ಬಿಡುಗಡೆಮಾಡುತ್ತವೆ ಹಾಗೂ ಹೆಚ್ಚಿಸುತ್ತವೆ. ಕಲ್ಲಿನ ಪುಡಿ, ಡಾ. ಬ್ಯಾಶ್ ರವರ ಹೂವಿನ ಚಿಕಿತ್ಸಕಗಳಾದ ಕಲ್ಲು ಗುಲಾಬಿ, ಚೆರ್ರಿ ಹಣ್ಣು, ಕ್ಲೆಮಾಟಿಸ್ ಬಳ್ಳಿ, ಕಾಡುಸೇಬು, ಬೆತ್ಲೆಹೆಮ್ ಚುಕ್ಕಿ ಹೂಗಿಡಗಳನ್ನೂ ಇದಕ್ಕೆ ಸೇರಿಸಲಾಗಿದೆ. ಇದರಿಂದ ಈ ಗೊಬ್ಬರವನ್ನು ಬಳಸುವ ಗಿಡಗಳಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ಪ್ರತಿ 25 ಮಿಲೀಗೆ ಅದರ 33 ಪಟ್ಟು ನೀರು ಸೇರಿಸಿ ಚಿಕ್ಕ ಗಿಡಗಳಿಗೆ ಬಳಸುವುದು. ದೊಡ್ಡ ಗಿಡಗಳಿಗೆ ಈ ಪ್ರಮಾಣ ಹೆಚ್ಚಿಸಬಹುದು.

ಶ್ರೀಮತಿ ವಿಜಯಲಕ್ಷ್ಮಿ, ಎಂ.ಎ., ಡಿ.ಎನ್.ಟಿ

ಪ್ರಕೃತಿ ಚಿಕಿತ್ಸಕರು

ಮೊಬೈಲ್ – 98459 49273

Leave a Reply

This site uses Akismet to reduce spam. Learn how your comment data is processed.